ಚಟ್ನಿಗಳು


1) ಕೊತ್ತಂಬರಿ ಸೊಪ್ಪಿನ ಚಟ್ನಿ.(4-5 ಜನರಿಗೆ)

ಬೇಕಾಗುವ ವಸ್ತುಗಳು:-
ಕೊತ್ತಂಬರಿ ಸೊಪ್ಪು ೧ ಕಪ್,
ತೆಂಗಿನತುರಿ ಅರ್ಧ ಕಪ್,
ಹಸಿ ಬೆಳ್ಳುಳ್ಳಿ ೨ ಬೀಜ,
ಹಸಿಮೆಣಸು ೪-೫,
ಉಪ್ಪು ೧ ಚಮಚ,
ಹುಣಸೆಹಣ್ಣು ಸ್ವಲ್ಪ,
ಒಗ್ಗರಣ್ಣೆಗೆ ಎಣ್ಣೆ ೧ ಚಮಚ,
ಸಾಸಿವೆ ಅರ್ಧ ಚಮಚ,
ಒಣಮೆಣಸು ೧.

ವಿಧಾನ:- ಕೊತ್ತಂಬರಿ ಸೊಪ್ಪನ್ನು ತೊಳೆದು ಶುದ್ದ ಮಾಡಿಕೊಂಡು, ತೆಂಗಿನತುರಿ, ಹಸಿಬೆಳ್ಳುಳ್ಳಿ, ಹಸಿಮೆಣಸು, ಹುಳಿ, ಉಪ್ಪು ಹಾಕಿ ಚಟ್ನಿಯಂತೆ ರುಬ್ಬಿ, ಸ್ವಲ್ಪವೇ ನೀರು ಸೇರಿಸಿ ಸಾಸಿವೆ ಒಣಮೆಣಸಿನ ಒಗ್ಗರಣೆ ಕೊಡಿ. ಈ ಚಟ್ನಿ ಊಟದ ಜೊತೆಯಲ್ಲದೇ ದೋಸೆ ಇಡ್ಲಿಯೊಂದಿಗೂ ರುಚಿ.