ತಂಬುಳಿಗಳು.

1) ಕೊತ್ತಂಬರಿ ಸೊಪ್ಪಿನ ತಂಬುಳಿ.

ಬೇಕಾಗುವ (೫-೬ ಜನರಿಗೆ) ವಸ್ತುಗಳು :-
ಕೊತ್ತಂಬರಿ ೧ ಕಪ್,
ಕಾಯಿತುರಿ ಅರ್ಧ ಕಪ್,
ಹಸಿಮೆಣಸು ೨-೩,
ಸಿಹಿಮೊಸರು ಅಥವಾ ಮಜ್ಜಿಗೆ ೪ ಕಪ್,
ಉಪ್ಪು ೨-೩ ಚಮಚ,
ಜೀರಿಗೆ ಕಾಲು ಚಮಚ,
ತುಪ್ಪ ಅರ್ಧ ಚಮಚ,
ಅರ್ಧ ಒಣಮೆಣಸು.

ವಿಧಾನ:- ಕೊತ್ತಂಬರಿ ಸೊಪ್ಪು ಬೇರು ಮತ್ತು ಬಲಿತ ದಂಟುಗಳಿಂದ ಬೇರ್ಪಡಿಸಿ, ಎಳೆಯ ದಂಟು ಮತ್ತು ಸೊಪ್ಪನ್ನು ತೆಗೆದು ತೊಳೆದುಕೊಂಡು, ಹಸಿಮೆಣಸು - ಕಾಯಿತುರಿ ಜೊತೆ ನುಣ್ಣಗೆ ರುಬ್ಬಿ. ಉಪ್ಪು ಮಜ್ಜಿಗೆ ಬೆರಸಿ, ತುಪ್ಪದಲ್ಲಿ ಜೀರಿಗೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ.